ಈ ತಾಣದಲ್ಲಿ ಕಳೆದ ಕೆಲವು ತಿಂಗಳುಗಳಿಂದ ಯಾವುದೇ ಹೊಸ ಚಿತ್ರ ಸಾಹಿತ್ಯ ಪ್ರಕಟವಾಗಿಲ್ಲ. ಆದರೆ ಈ ತಾಣವಿನ್ನೂ ಜೀವಂತವಾಗಿದೆ. ಮುಂದೆ ಯಾವಗಲಾದರೋ update ಆಗುವ ಸಾಧ್ಯತೆ ಇದೆ. ಈ ತಾಣಕ್ಕೆ ಆವಾಗವಾಗ ಭೇಟಿ ನೀಡುತ್ತಿರಿ. ವಂದನೆಗಳು :)

Last updated on August 2016

Unsuccessfully Completing 8 Years

August 7, 2016

Mungaru Male 2 - Sariyagi Nenapide Nanage Lyrics

ಚಿತ್ರ: ಮುಂಗಾರು ಮಳೆ ೨
ಹಾಡು: ಸರಿಯಾಗಿ 
ಗಾಯಕರು: ಅರ್ಮಾನ್ ಮಲಿಕ್ 
ಸಂಗೀತ: ಅರ್ಜುನ್ ಜನ್ಯ 
ಸಾಹಿತ್ಯ: ಜಯಂತ್ ಕಾಯ್ಕಿಣಿ 

ಸರಿಯಾಗಿ ನೆನಪಿದೆ ನನಗೆ
ಇದಕೆಲ್ಲ ಕಾರಣ ಕಿರುನಗೆ ।

ಮನದ ಪ್ರತಿ ಗಲ್ಲಿಯೊಳಗು  ನಿನದೇ ಮೆರವಣಿಗೆ
ಕನಸಿನ ಕುಲುಮೆಗೇ ಉಸಿರನೂ ಊದುತಾ
ಕಿಡಿ ಹಾರುವುದು ಇನ್ನು ಖಚಿತ ।

ಸರಿಯಾಗಿ ನೆನಪಿದೆ ನನಗೆ
ಇದಕೆಲ್ಲ ಕಾರಣ ಕಿರುನಗೆ ।

ಕಣ್ಣಲೇ ಇದೆ ಎಲ್ಲ ಕಾಗದ
ನೀನೆ ನನ್ನಯ ಅಂಚೆ ಪೆಟ್ಟಿಗೆ ।
ಏನೇ ಕಂಡರೂ ನೀನೆ ಜ್ಞಾಪಕ
ನೀನೆ ಔಷಧಿ ನನ್ನ ಹುಚ್ಚಿಗೆ ।
ತೆರೆದೂ ನೀನು ಮುದ್ದಾದ ಅಧ್ಯಾಯ
ಸಿಗದೇ ಇದ್ರೆ ತುಂಬಾನೇ ಅನ್ಯಾಯ ।
ನನ್ನಯಾ ನಡೆ ನುಡೀ ನಿನ್ನನೇ ಬಯಸುತಾ
ಬದಲಾಗುವುದು ಇನ್ನು ಖಚಿತ ।

ಸರಿಯಾಗಿ ನೆನಪಿದೆ ನನಗೆ
ಇದಕೆಲ್ಲ ಕಾರಣ ಕಿರುನಗೆ ।

ನಿನ್ನ ನೃತ್ಯಕೇ ಸಿದ್ಧವಾಗಿದೆ 
ಅಂತರಂಗದ ರಂಗ ಸಜ್ಜಿಕೆ ।
ನಿನ್ನ ನೋಡದ ನನ್ನ ಜೀವನಾ 
ಸುದ್ದಿ ಇಲ್ಲದಾ ಸುದ್ದಿಪತ್ರಿಕೇ ।
ಸೆರೆ ಸಿಕ್ಕಾಗ ಬೇಕಿಲ್ಲ ಜಾಮೀನು 
ಸರಸಕ್ಕ್ಕೀಗ ನಿಂದೇನೆ ಕಾನೂನು ।
ಕೊರೆಯುವಾ ನೆನಪಲೀ ಇರುಳನೂ ಕಳೆಯುತಾ 
ಬೆಳಗಾಗುವುದೂ ಇನ್ನು ಖಚಿತ ।

ಸರಿಯಾಗಿ ನೆನಪಿದೆ ನನಗೆ
ಇದಕೆಲ್ಲ ಕಾರಣ ಕಿರುನಗೆ ।


November 28, 2013

Brindavana - Heartalliro Lyrics

ಚಿತ್ರ: ಬೃಂದಾವನ 
ಹಾಡು: ಹಾರ್ಟಲ್ಲಿರೋ
ಗಾಯಕರು: ಟಿಪ್ಪು 
ಸಂಗೀತ: ವಿ ಹರಿಕೃಷ್ಣ 
ಸಾಹಿತ್ಯ: ಕವಿರಾಜ್

ಹೆ ರೂ ರೂಬಾ 
ಹೇ ರೂ ರೂಬಾ 
ಹೇ ರೂ ರೂಬ ಹೆಯೋ ಹೆಯೋ ಹೆಯೋ ಹೆಯೋ 
ಹೆ ರೂ ರೂಬಾ 
ಹೇ ರೂ ರೂಬಾ 
ಹೇ ರೂ ರೂಬ ಹೇ... 

Heartaಲ್ಲಿರೋ Harmonium ಟ್ಯೂನು ಹಾಕಿದೆ । ರೂಬ ರೂ ರೂಬ ರೂ
ಈ ಮನಸಿನ FMಅಲಿ ನಿಂದೆ ಹಾಡಿದೆ । ರೂಬ ರೂ ರೂಬ ರೂ
ಬದ್ಮಾಶು ನನ್ನ ದಿಲ್ ಖುಷಿಯಿಂದ ಪಲ್ಟಿ ಹೊಡೆದಿದೆ । ನಿನ್ನನ್ನೇ ನೋಡುತ ಸ್ಟೈಲಾಗಿ ಸೀಟಿ ಹೊಡೆದಿದೆ ।
ಅಯ್ಯಯ್ಯೊ ಎಕ್ಕುಟ್ಹೋದೆ ನಾ ।
ಸೂಡಾಂಗನೀ ಸೂಡಾಂಗನೀ ನಾನೊಬ್ನೇ ಇಲ್ಲಿ अच्छा लड़का ।
ಸೂಡಾಂಗನೀ ಸೂಡಾಂಗನೀ ಬಿಡಬೇಡ ನನ್ನ ಗಟ್ಟಿ ಹಿಡ್ಕಾ ।
Heartaಲ್ಲಿರೋ Harmonium ಟ್ಯೂನು ಹಾಕಿದೆ । ರೂಬ ರೂ ರೂಬ ರೂ
ಈ ಮನಸಿನ FMಅಲಿ ನಿಂದೆ ಹಾಡಿದೆ । ರೂಬ ರೂ ರೂಬ ರೂ

ಹೇ ರೂಬ ರೂಬಾ
ಹೇ ರೂಬ ರೂಬಾ
ಹೇ ರೂಬ ರೂಬಾ ರೂ... 

ಅಯ್ಯಯ್ಯೋ ಕಾಮನಬಿಲ್ಲೇ Shakehand ಮಾಡಿತು ನೋಡು ।
ಕಣ್ಣಲ್ಲಿ ಕನಸು ನೂರು Walking ಹೊರಟಿದೆ ನೋಡು ।
ನಿನ್ ಹಿಂದೆ ಮಾಡ್ತಾವಂತೆ ಹೂವೆಲ್ಲ Paradu.. |
ಉದ್ಯಾನ ಆಗೇ ಹೋಯ್ತು ನೀನು ಹೋಗೊ Roadu...  |
ಓ मेरी दिलरुबा ನೀನು ಚಂದ್ರನ ತಂಗಿಯೇ ?
ಓ  मेरी दिलरुबा ನೀನು ಬಾನಿನ ಚುಕ್ಕಿಯೇ ?
ತಗಲಾಕೊಂಡೆ ನಾ ನಿನ್ನ ಚೆಂಡಿನ ಏಟಿಗೆ ।
Silentಆಗ್ ಎಕ್ಕುಟ್ಹೋದೆ ನಾ ।

ಸೂಡಾಂಗನೀ ಸೂಡಾಂಗನೀ ನಾನೊಬ್ನೇ ಇಲ್ಲಿ अच्छा लड़का ।
ಸೂಡಾಂಗನೀ ಸೂಡಾಂಗನೀ ಬಿಡಬೇಡ ನನ್ನ ಗಟ್ಟಿ ಹಿಡ್ಕಾ । 

ಮಹಿ ಮಹಾ ಮಹಿ ಮಹಾ ಮಹಿ ಮಹಾ... 
ಮಹಿ ಮಹಾ ಮಹಿ ಮಹಾ ಮಹಿ ಮಹಾ...

Hey Am Out of Range | Hey its all Insane |
Hey You got my Number Ring Ring Ring comeon Ring me baby |
Hey Just one more time | Hey you call me baby |
Hey I need you Now Get Get Get comeon Get me baby...baby...baby |

ನಕ್ತಿದ್ರೆ ನೀ ಹಿಂಗೆ ನನ್ನ ನೋಡಿ ಹಸೀನಾ ।
ಕಿತ್ಕೊಂಡು ಬರ್ತಾ ಐತೆ ಮೈ ತುಂಬಾ पसीना ।
ಸಕ್ರೆಲಿ ಅದ್ದು ಇಟ್ಟ ಸೇಬು ಹಣ್ಣು ನೀನಾ.. ?
Morningu ಸೂರ್ಯ ಹುಟ್ಟೋದ್ ನಿನ್ನ ನೋಡೋಕೆನಾ.. ?
ಹೂ ಅಂದ್ರೆ ಹೊದೆಸುವೆ ನಾನು ಎಲ್ಲೆಡೆ ಡಂಗುರ ।
ಆಕಾಶ ಮುಚ್ಚುವ ಹಾಗೆ ಹಾಕಿಸಿ ಚಪ್ಪರ ।
ಜೇಬಲ್ಲಿ ಕುಂತಿದೆ ಒಂದು ವಜ್ರದ ಉಂಗುರ ।
ನಾವಿಬ್ರು Made for Each Other |

ಸೂಡಾಂಗನೀ ಸೂಡಾಂಗನೀ ನಾನೊಬ್ನೇ ಇಲ್ಲಿ अच्छा लड़का ।
ಸೂಡಾಂಗನೀ ಸೂಡಾಂಗನೀ ಬಿಡಬೇಡ ನನ್ನ ಗಟ್ಟಿ ಹಿಡ್ಕಾ ।
Heartaಲ್ಲಿರೋ Harmonium ಟ್ಯೂನು ಹಾಕಿದೆ । ರೂಬ ರೂ ರೂಬ ರೂ
ಈ ಮನಸಿನ FMಅಲಿ ನಿಂದೆ ಹಾಡಿದೆ । ರೂಬ ರೂ ರೂಬ ರೂ

September 7, 2013

Victory - Khali Quarter Lyrics

ಚಿತ್ರ: ವಿಕ್ಟರಿ 
ಹಾಡು: ಖಾಲಿ ಕ್ವಾಟ್ರು
ಗಾಯಕರು: ವಿಜಯ್ ಪ್ರಕಾಶ್
ಸಂಗೀತ: ಅರ್ಜುನ್ ಜನ್ಯ 
ಸಾಹಿತ್ಯ: ಯೋಗರಾಜ್ ಭಟ್ 

ಯಾವತ್ತೂ ಮನ್ಸಾ ಒಂಟಿ ಪಿಸಾಚಿ ಅಲ್ಲ । ವಾ ವಾ ವಾ ವಾ ವಾಹ್
Bar Supplierಗಿಂತ ಒಳ್ಳೆ ಗೆಳೆಯಾ ಇಲ್ಲ , ಒಳ್ಳೆ ಗೆಳೆಯಾ... ಇಲ್ಲ ।

ಖಾಲಿ ಕ್ವಾಟ್ರು ಬಾಟ್ಲಿ ಹಂಗೆ Lifu , ಆಚೆಗ್ ಹಾಕವ್ಳೆ  Wifu ।
ಖಾಲಿ ಕ್ವಾಟ್ರು ಬಾಟ್ಲಿ ಹಂಗೆ Lifu , ಆಚೆಗ್ ಹಾಕವ್ಳೆ  Wifu ।

ಕಣ್ ತುಂಬ ನೀರು ಬಾಯ್ ತುಂಬಾ ಬೀರು , ಕಣ್ ತುಂಬ ನೀರು ಬಾಯ್ ತುಂಬಾ ಬೀರು
ನಿಜವಾಗ್ಲು , ನಿಜವಾಗ್ಲು, ನಿಜವಾಗ್ಲು ಬಾರು ಗಂಡ್ ಮಕ್ಳ ತವರು - ಗಂಡ್ ಮಕ್ಳ ತವರು - ಗಂಡ್ ಮಕ್ಳ ತವರು ।
 ಗಂಡ್ ಮಕ್ಳ ತವರು - ಗಂಡ್ ಮಕ್ಳ ತವರು ।

 ಖಾಲಿ ಕ್ವಾಟ್ರು ಬಾಟ್ಲಿ ಹಂಗೆ Lifu , ಆಚೆಗ್ ಹಾಕವ್ಳೆ  Wifu , ಒದ್ದು ಓಡ್ಸವ್ಳೇ ನನ್ Wifu... |

(ಕುಡುಕ ಕುಡಿದೆಇದ್ರು ಕುಡುಕಾನೆ , ಕುಡುಕ ಕುಡ್ಕೊಂಡಿದ್ರು ಕುಡುಕಾನೆ , ಕುಡ್ಕೊಂಡೆ ಇರ್ತೀನ್ ನಾನು ಕುಡುಕಾನೆ , ಕುಡುಕ ಕುಡುಕಾ - ಕುಡುಕಾ - ಕುಡುಕಾ)

ಊರಿಗೂರೇ ಸುಡುಗಾಡು , ಊರಿಗೂರೇ ಸುಡುಗಾಡು ಎಣ್ಣೆ ಅಂಗಡಿ ಒಂದೇ ಸಾವಿಲ್ಲದ Placu |
ಬಾರು ಬಾಗ್ಲು ದಯವಿಟ್ಟು , ಬಾರು ಬಾಗ್ಲು ದಯವಿಟ್ಟು 24 Hoursu ಮುಚ್ಚಬೇಡಿ Pleasu |
ಕುಡುಕ್ರು ಒಳ್ಳೇವ್ರು ಎಣ್ಣೆ ತುಂಬಾ ಕೆಟ್ಟುದ್ದು , Daily ಕುಡಿಯೋದು ತಮ್ ತಮಗೆ ಬಿಟ್ಟಿದ್ದು ।
ದುಃಖಕ್ಕೆ ನೀರು ಕುಡಿತಾರೆ ಯಾರು - ದುಃಖಕ್ಕೆ ನೀರು ಕುಡಿತಾರೆ ಯಾರು 
ನಿಜವಾಗ್ಲು ಗುರುವೇ , ನಿಜವಾಗ್ಲು , ನಿಜವಾಗ್ಲು ಬಿಲ್ಲು ಕಟ್ಟೋನೆ ದೇವ್ರು - ಕಟ್ಟೋನೆ ದೇವ್ರು - ಕಟ್ಟೋನೆ ದೇವ್ರು।
ಕಟ್ಟೋನೆ ದೇವ್ರು  - ಕಟ್ಟೋನೆ ದೇವ್ರು।

ಖಾಲಿ ಕ್ವಾಟ್ರು ಬಾಟ್ಲಿ ಹಂಗೆ Lifu , ಆಚೆಗ್ ಹಾಕವ್ಳೆ  Wifu ।

lovvu ನೋವು ಎರಡು , ಅವ್ಳಿ ಜವ್ಳಿ ಇದ್ಹಂಗೆ । ಮದುವೆ ಮಕ್ಳು ಇತ್ಯಾದಿ , ಹಾವು ಬಿಟ್ಟು ಕೊಂಡ್ಹಂಗೆ ।
ಮನೆಗ್ಹೋದ್ರೆ ಅದೇ ಹೆಂಡ್ತಿ ಹಸುರು Colour ಹಳೆ Nighty , Banku ಸಾಲ Caru Gasu ಮನೆ ಬಾಡ್ಗೆ ಮಕ್ಳು Feesu |
ಅದೇ Cooker ಅನ್ನ ಸಾರು ಮಕ್ಳ ಕೈಲಿ Plastic Caru , Middle Classu ಹಳೆ Scooter ಯಾವಗಂದ್ರೆ ಆವಾಗ್ Puncture |
ಬಾಳು ಅಂದ್ರೆ ಏನು ಅಂತ ಹೇಳಲೇ , Medicinne ಇಲ್ದೆ ಇರೋ ಖಾಯಿಲೇ ।
ಇಲ್ಲಿಲ್ಲ ಯಾರು ಔಷ್ಧಿ ಕೊಡೋರು , ಬಿಟ್ಟು ಕೊಳ್ದೋರು ಬಿಟ್ ಕೇಳಿ ಚೂರು 
ನಿಜವಾಗ್ಲು ಗುರುವೇ , ನಿಜವಾಗ್ಲು , ನಿಜವಾಗ್ಲು ಕುಡುಕ್ರೆ ಸಮಾಜಕ್ಕೆ ಡಾಕ್ಟರು - ಸಮಾಜಕ್ಕೆ ಡಾಕ್ಟರು- ಸಮಾಜಕ್ಕೆ ಡಾಕ್ಟರು।
ಸಮಾಜಕ್ಕೆ ಡಾಕ್ಟರು - ಸಮಾಜಕ್ಕೆ ಡಾಕ್ಟರು।

ಖಾಲಿ ಕ್ವಾಟ್ರು ಬಾಟ್ಲಿ ಹಂಗೆ Lifu , ಆಚೆಗ್ ಹಾಕವ್ಳೆ  Wifu ।
ಖಾಲಿ ಕ್ವಾಟ್ರು ಬಾಟ್ಲಿ ಹಂಗೆ Lifu , ಆಚೆಗ್ ಹಾಕವ್ಳೆ  Wifu , ಒದ್ದು ಓಡ್ಸವ್ಳೇ ನನ್ Wifu... |