ಈ ತಾಣದಲ್ಲಿ ಕಳೆದ ಕೆಲವು ತಿಂಗಳುಗಳಿಂದ ಯಾವುದೇ ಹೊಸ ಚಿತ್ರ ಸಾಹಿತ್ಯ ಪ್ರಕಟವಾಗಿಲ್ಲ. ಆದರೆ ಈ ತಾಣವಿನ್ನೂ ಜೀವಂತವಾಗಿದೆ. ಮುಂದೆ ಯಾವಗಲಾದರೋ update ಆಗುವ ಸಾಧ್ಯತೆ ಇದೆ. ಈ ತಾಣಕ್ಕೆ ಆವಾಗವಾಗ ಭೇಟಿ ನೀಡುತ್ತಿರಿ. ವಂದನೆಗಳು :)

Last updated on November 2022

Unsuccessfully Completing 14 Years
Miss you Puneeth Rajkumar Sir

About Us

ಈ ತಾಣವನ್ನು ೧ ಜೂನ್ ೨೦೦೮ ರಂದು ಆರಂಭಿಸಲಾಯಿತು. ಕನ್ನಡ ಚಿತ್ರ ಸಂಗೀತವನ್ನು ಉಚಿತವಾಗಿ ಡೌನ್ಲೋಡ್ ಮಾಡಬಹುದಾದಂತಹ ತಾಣ ಇದಾಗಿತ್ತು. ಈ ತಾಣದ ಮುಖ್ಯ ಉದ್ದೇಶ ಕನ್ನಡ ಹಾಡುಗಳನ್ನು ಪ್ರಚಾರ ಮಾಡುವುದಾಗಿತ್ತು. ಈ ತಾಣಕ್ಕೆ ಕೇವಲ ೩ ವರ್ಷಗಳಲ್ಲಿ ಸುಮಾರು ೧ ದಶಲಕ್ಷ ಜನರು ಭೇಟಿ ಮಾಡಿದ್ದರು. ೨೦೧೧ ರಲ್ಲಿ ಈ ಜಾಲತಾಣವನ್ನು ಮುಚ್ಚುವ ಸಮಯದಲ್ಲಿ ಪ್ರತಿನಿತ್ಯ ಸುಮಾರು ೨೦೦೦ ಜನರು ಈ ತಾಣಕ್ಕೆ ಭೇಟಿ ನೀಡುತಿದ್ದರು. ಅನೇಕರು ಈ ತಾಣಕ್ಕೆ ಪದೇ ಪದೇ ಭೇಟಿ ನೀಡುತ್ತಿದ್ದುದು ಈ ತಾಣದ ಜನಪ್ರಿಯತೆಯನ್ನು ತೋರಿಸುತ್ತದೆ.

ಆದರೆ, ಕನ್ನಡ ಹಾಡುಗಳನ್ನು ವಿತರಿಸಲು ಹಕ್ಕುಸ್ವಾಮ್ಯ ಷರತ್ತುಗಳ ಕಾರಣದಿಂದ ಈ ಜಾಲತಾಣವನ್ನು ಜೂನ್ ೨೦೧೧ ರಲ್ಲಿ ಮುಚ್ಚಲಾಯಿತು. ನಾನು ಈ ತಾಣವನ್ನು ೨೦೧೨ ರಲ್ಲಿ ಕನ್ನಡ ಚಿತ್ರರಂಗದ ಬಗ್ಗೆ ಮಾಹಿತಿ ನೀಡುವ ಉದ್ದೇಶದಿಂದ ಮತ್ತೆ ಪ್ರಾರಂಭಿಸಲು ಪ್ರಯತ್ನಿಸಿದೆನು. ಆದರೆ ಸಮಯದ ಅಭಾವದಿಂದ ಅದನ್ನು ಮುಂದುವರಿಸಲು ಸಾಧ್ಯವಾಗಲಿಲ್ಲ.

ಈಗ ನಾನು ಮತ್ತೆ ಕನ್ನಡ ಸಾಹಿತ್ಯವನ್ನು ನೀಡುವ ಉದ್ದೇಶದಿಂದ ಈ ಜಾಲತಾಣವನ್ನು ಪುನರಾರಂಭಿಸಿರುವೆನು. ಈ ತಾಣವು ಹಿಂದಿನ ಗುಣಮಟ್ಟವನ್ನು ಕಾಯ್ದುಕೊಂಡು ಹೋಗುವಂತೆ ನೋಡಿಕೊಳ್ಳುವ ಪ್ರಯತ್ನ ನಾನು ಮಾಡುತ್ತೇನೆ.

No comments: